ಪ್ರೀತಿ ಹುಟ್ಟುವುದು ಕಣ್ಣಿನಿಂದ, ಆದರೆ......!
ಪ್ರೀತಿ ನಮಗೆ ಬೇಕು ಅಂದಾಗ ಹುಟ್ಟುವುದಿಲ್ಲ. ಹಾಗೆ, ನಾನು ಪ್ರೀತಿಸಲೇ ಬೇಕು ಎಂದು ಹುಡುಕುತಾ ಹುಡುಕುತಾ ಹೋದರೆ ಸಿಗುವ ವಸ್ತುವು ಅದಲ್ಲ. ಸಿಗದೆ ಇದ್ದಾಗಲೂ ಯಾರೋ ಸುಂದರವಿರುವ ಹುಡುಗ/ಹುಡುಗಿಯರನ್ನು ಕಂಡು ಅವರು ನಮಗೆ ಇಷ್ಟ ಆಗಿ, ಇವರೆ ಸರಿ ಎಂದು ಪ್ರಸ್ತಾಪ ಮಾಡಿ `ನನ್ನನ್ನು ಪ್ರೀತಿಸು, ನಿನ್ನನ್ನು ಬಿಟ್ಟು ಬದುಕುವ ಶಕ್ತಿ ನನಗಿಲ್ಲಾ ಎಂದು' ಕೇಳಿಕೊಳ್ಳುವುದು ನಿಜವಾದ ಪ್ರೀತಿಯಲ್ಲ.'ನಿಜವಾದ ಪ್ರೀತಿ' ಹುಟ್ಟೋದೆ ಒಂದು 'ವಿಸ್ಮಯ'. ಅದು ಹುಟ್ಟೊದು ಕಣ್ಣಿಂದ; ಅಕಸ್ಮಾತಾಗಿ ನಮ್ಮ ನೋಟ ಮತ್ಯಾರದೊ ನೋಟ ಆಗಿ ಮನಸ್ಸಿಗೆ ತಾಗಿ ಒಂದು ಕ್ಷಣ ಅಂತರಾಳದಲ್ಲಿ ನಡುಕವಾಗಿ, ಚಿತ್ತ ಚಂಚಲವಾಗಿ, ಮನಸ್ಸು ಶಾಂತವಾಗಿ, ಮತ್ತೊಂದು ಅರಿಯದ ಲೋಕದಲ್ಲಿ ತೇಲಾಡಿದಂತ ಅನುಭವವಾಗುತ್ತದೆ. ಜೊತೆಗೆ ನಮ್ಮ ನೋಟಕ್ಕೆ ನೋಟ ಪರಸ್ಪರ ಢಿಕ್ಕಿಯಾಗಿ, ನಮಗಿಷ್ಟದ ಮೊಗದಲ್ಲಿ ಸೂಕ್ಷ್ಮ ಬದಲಾವಣೆ, ಕಣ್ಣಿನಲ್ಲಿ ಚಂಚಲತೆ ಮತ್ತು ನಮ್ಮ ನೋಟಕ್ಕೆ ಸಿಕ್ಕಿಹಾಕಿಕೊಂಡೆನೆಂಬ ಭಾವದಿಂದ ತಪ್ಪಿಸಿಕೊಂಡು ಹೋಗುವ ಆತುರ ಉಂಟಾಗುತ್ತದೆ. ಈ ಅನುಭವ ಮತ್ತು ಆತುರ ನಮಗೂ ಆಗುತ್ತದೆ. ಈ ರೀತಿಯಲ್ಲಿ ಉಂಟಾಗುವ ಮಧುರ ಕ್ಷಣವೆ 'ನಿಜವಾದ ಪ್ರೀತಿಯ ಉಗಮ'.
ಹೀಗೆ ಹುಟ್ಟಿದ ಪ್ರೀತಿ ಮತ್ತೆ ಮತ್ತೆ ಅನಿರೀಕ್ಷಿತವಾಗಿ ಎದುರಾಗುತ್ತದೆ. ನಮಗೆ ತಿಳಿಯದೆ ನಮ್ಮ ಮನಸ್ಸು ಪ್ರೀತಿಯ ಸನಿಹದಲ್ಲೆ ಇರಲು ಚಡಪಡಿಸುತ್ತದೆ. ಎದುರು ಬರಲು ಭಯವಾಗುತ್ತದೆ. ದೂರವಿರಲು ಬೇಸರವಾಗುತ್ತದೆ. ಮಾತನಾಡಬೇಕೆನಿಸಿದರು ಮಾತನಾಡಲು ಸಂಕೋಚವಾಗಿ ನಾಲಿಗೆ ತೊದಲುತ್ತದೆ. ಇಷ್ಟಾದರು ಮತ್ತೆ ಮತ್ತೆ ನೋಡಬೇಕು, ಮಾತನಾಡಬೇಕು ಅನಿಸುತ್ತಲೇ ಇರುತ್ತದೆ.
ಹೀಗೆ ಮನಸ್ಸು ಮನಸ್ಸು ಒಂದಾಗಿ, ಕನಸು ಕಲ್ಪನೆಗಳಲ್ಲಿ ಒಂದಾಗಿ `ಪ್ರೀತಿ ಭಾವ' ನುಡಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ' ಅಂತಾ ಹೃದಯದಿಂದ ಹೊರಬರುವ ಉಸಿರಿಗೆ ಪ್ರತಿಯಾಗಿ `ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂಬ ಉಸಿರು ಒಂದಾಗುತ್ತದೆ. ಕಣ್ಣಿಂದ ಹುಟ್ಟಿದ ಪ್ರೀತಿ ಎರಡು ಹೃದಯಗಳನ್ನು ಒಂದಾಗಿಸಿ ಪ್ರೀತಿಯನ್ನು ಗೆಲ್ಲಿಸುತ್ತದೆ. ಹೀಗಿರುವಾಗ....
ಸಾಮಾನ್ಯವಾಗಿ ಎಲ್ಲರಿಗೂ ಪ್ರೀತಿಯನ್ನು ಹುಡುಕುವ ಆತುರ. ಹುಡುಕಿ... ಅದು ತಪ್ಪಲ್ಲ. ಪ್ರೀತಿ ಅನ್ನೋದು ಸುಂದರ ಭಾವನೆಗಳ ವಿಲಾಸ. ಹಾಗೆಯೇ ಪ್ರೀತಿ ಕಣ್ಣಿಂದ ಹುಟ್ಟುತ್ತದೆ ಎಂದು, ಕಣ್ಣನ್ನೆ ನೋಡುತ್ತಾ ಹುಡುಕುವುದು ತಪ್ಪು. ನೋಟಕ್ಕೆ ನೋಟ ಢಿಕ್ಕಿ ಆಗೋದು ಅರಿವಿಲ್ಲದೆ! ಪ್ರೀತಿ ಹುಡುಕುವ ಗುಂಗಿನಲ್ಲಿ ಸೌಂದರ್ಯ, ಮೋಹ, ಆಸೆಗೆ ಬಲಿಯಾಗಿ ನಿಜವಾದ ಪ್ರೀತಿ ಇರದೆ ಯಾರನ್ನೋ ಇಷ್ಟ ಪಟ್ಟು ಮೋಸ ಹೋಗಿ ಬದುಕನ್ನು ಹಾಳು ಮಾಡಿಕೊಳ್ಳಬಾರದು. ಪ್ರೀತಿ ಬದುಕಿಗೆ ಸ್ಪೂತರ್ಿಯಾಗಿ ಉನ್ನತ ಮಟ್ಟಕ್ಕೆ ಒಯ್ಯಬೇಕೆ ಹೊರತು ಪ್ರೀತಿಯಿಂದ ಬದುಕೇ ಅವನತಿಯಾಗಬಾರದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ