ಎಚ್ಚರಿಕೆ.....!!
'ಫೇಸ್ಬುಕ್'ನಲ್ಲಿ ನಕಲಿ ಖಾತೆಗಳಿವೆ...
ನಾಗರಾಜ್ ಬಿ.ಎನ್.ಭಾರತದಲ್ಲಿ 2010 ಸಂದರ್ಭದಲ್ಲಿ ಕೇವಲ 8 ಲಕ್ಷ ಫೇಸ್ಬುಕ್ ಬಳಕೆದಾರರಿದ್ದರು. ಆದರೆ ಪ್ರಸ್ತುತ (2014 ಏಪ್ರಿಲ್ ತಿಂಗಳಲ್ಲಿ) ಆ ಸಂಖ್ಯೆ ಬರೋಬ್ಬರಿ 10 ಕೋಟಿಗೆ ಏರಿದೆ....!! ಅಂದರೆ, ಮೂರು ವರ್ಷದ ಅವಧಿಯಲ್ಲಿ ಬಳಕೆದಾರರ ಸಂಖ್ಯೆ ಇಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿದೆ ಅಂದರೆ ಅದರ ಜನಪ್ರಿಯತೆ ಎಷ್ಟು ಎಂಬುದು ಸ್ವಲ್ಪ ಲೆಕ್ಕ ಹಾಕಿ. ಆಶ್ಚರ್ಯ ಎನಿಸಬಹುದು!
ಆದರೆ... ಈ ಆಶ್ಚರ್ಯ ಜೊತೆಗೆ ಇನ್ನೊಂದು ಆಘಾತಕಾರಿ ವಿಷಯವೇನೆಂದರೆ ಈ 10ಕೋಟಿ ಫೇಸ್ಬುಕ್ ಬಳಕೆದಾರರ ಖಾತೆಗಳಲ್ಲಿ ಶೇ. 20ರಷ್ಟು ಖಾತೆಗಳು ನಕಲಿ...!!
ಯಾರದ್ದೋ ಹೆಸರಲ್ಲಿ, ಇನ್ಯಾರದ್ದೋ ಭಾವಚಿತ್ರ ಹಾಕಿ ನಕಲಿ ಖಾತೆಯನ್ನು ಸೃಷ್ಟಿಸಿಕೊಂಡಿರುತ್ತಾರೆ. ಅನಾಮಧೇಯ ಹೆಸರಲ್ಲಿ ಖಾತೆಯನ್ನು ಮಾಡಿಕೊಂಡು, ವ್ಯವಸ್ಥಿತವಾಗಿ ಮೋಸದ ಬಲೆ ಹೆಣೆಯುತ್ತಾರೆ.
ಎಲ್ಲೋ ಒಂದು ಮೂಲೆಯಲ್ಲಿದ್ದು ಮೋಸ ಮಾಡುವ ಬದಲು, ಹತ್ತಿರವೇ ಇದ್ದು ತಮ್ಮ ಅಪ್ತೆಷ್ಟರ ಕುತ್ತಿಗೆ ಕೊಯ್ಯುವ ಕಾಯಕದಲ್ಲಿ ಈ ನಕಲಿ ಖಾತೆದಾರರು ನಿರತರಾಗುತ್ತಾರೆ....! ಕೆಲವು ಪಡ್ಡೆ ಹುಡುಗರು ಹಾಗೂ ವಿಕೃತ ಮನಸ್ಸಿನವರು ತಮ್ಮದಲ್ಲದ ಹೆಸರಲ್ಲಿ ಖಾತೆಯನ್ನು ಸೃಷ್ಟಿಸಿಕೊಂಡು ಮಜಾ ಅನುಭವಿಸುತ್ತಾರೆ.
ನಕಲಿ ಖಾತೆಗೆ ಯಾವುದೋ ಒಂದು ಚಿಕ್ಕ ಮಗುವಿನ ಅಥವಾ ನಟಿಯ ಭಾವಚಿತ್ರವನ್ನು ಅಪ್ಪೋಡ್ ಮಾಡಿರುತ್ತಾರೆ. ನಂತರ ಇವರು ಫೇಸ್ಬುಕ್ ಖಾತೆಯಲ್ಲಿರುವ ಹುಡುಗಿಯರ ಸ್ನೇಹ ಬಯಸಿ ಮನವಿ ರವಾನಿಸುತ್ತಾರೆ. ಯಾವುದೋ ಹುಡುಗಿ ಸ್ನೇಹಕ್ಕಾಗಿ ಮನವಿ ಮಾಡಿದ್ದಾಳೆ ಎಂದು, ಹುಡಗಿ ಅವರ ಮನವಿಯನ್ನು ಸ್ವೀಕರಿಸಿ, ತನ್ನ ಸ್ನೇಹದ ಬಳಗಕ್ಕೆ ಸೇರಿಸಿಕೊಳ್ಳುತ್ತಾಳೆ. ಅರಿವಿಲ್ಲದೆ ಆ ಹುಡುಗಿ ಅವರ ಮೋಸದ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ.
ಒಂದೆರಡು ವಾರ, ತಿಂಗಳ ನಂತರ ನಕಲಿ ಖಾತೆ ಹೊಂದಿದ ವಿಕೃತ ಮನಸ್ಸಿನ ಹುಡುಗ ಆಕೆಯ ಜೊತೆ ನಿಧಾನಕ್ಕೆ ಚಾಟ್ ಮಾಡಲು ಪ್ರಾರಂಭಿಸುತ್ತಾನೆ. 'ಹಾಯ್'ನಲ್ಲಿ ಪ್ರಾರಂಭವಾಗುವ ಈ ಚಾಟ್ ಕೊನೆ ಕೊನೆಗೆ ಖಾಸಗಿ ವಿಷಯಗಳ ವಿನಿಮಯದತ್ತ ಸಾಗುತ್ತದೆ. ತನ್ನ ಸ್ನೇಹ ಬಯಸಿ ಮನವಿ ಕಳುಹಿಸಿದ್ದು ಹುಡುಗಿ ಎಂದುಕೊಂಡೇ ಆಕೆಯು ತನ್ನೆಲ್ಲ ಖಾಸಗಿ ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಾಳೆ. ಆಕೆಗೆ ಇದು ಮೋಸ ಎಂದು ಎಲ್ಲಿಯೂ ಅರಿವಾಗುವುದಿಲ್ಲ. ಅಷ್ಟೊಂದು ಚಾಕಚಕ್ಯತೆಯಿಂದ ಆ ವಿಕೃತ ಮನಸ್ಸಿನ ಯುವಕ ಅದನ್ನು ನಿಭಾಯಿಸಿಕೊಂಡು ಹೋಗುತ್ತಾನೆ...!!
ನಕಲಿ ಖಾತೆ ಬಳಕೆ ಮಾಡಿಕೊಂಡು ಹುಡುಗರನ್ನು ಯಾಮಾರಿಸುವುದರಲ್ಲಿ ಹುಡುಗಿಯರೂ ಕೂಡಾ ಹಿಂದೆ ಬಿದ್ದಿಲ್ಲ. ಅವರೂ ಸಹ ತಾವು ಯಾವುದರಲ್ಲಿಯೂ ಕಡಿಮೆಯಿಲ್ಲ ಎಂದು ಹುಡುಗರ ಇಲ್ಲವೇ ಯಾವುದೋ ಒಂದು ಹುಡುಗಿಯರ ಹೆಸರಲ್ಲಿ ನಕಲಿ ಖಾತೆಯನ್ನು ಸೃಷ್ಟಿ ಮಾಡಿಕೊಂಡಿರುತ್ತಾರೆ. ಮೊದ ಮೊದಲು ಹುಡುಗ ಹಾಕಿರುವ ಫೋಟೋಗಳನ್ನು ಲೈಕ್ ಮಾಡುತ್ತಾ.... ಕ್ರಮೇಣ ಫೋಟೊಗಳಿಗೆ ಕಮೆಂಟ್ಸ್ ಮಾಡಿ ಅವರ ಸ್ನೇಹವನ್ನು ಸಂಪಾದಿಸಿಕೊಳ್ಳುತ್ತಾರೆ. ಸ್ನೇಹ ಗಟ್ಟಿಯಾಗುತ್ತ ಹೋದ ಹಾಗೆ, ಹಾಯ್..... ಊಟ ಆಯ್ತಾ....? ಏನ್ಮಾಡ್ತಾ ಇದ್ದೀರಾ...? ಏನ್ ಜಾಬ್ ಮಾಡ್ತಾ ಇದ್ದೀರಾ...? ಹೀಗೆ ಚಟ್ಗಳ ಸರಣಿ ಸಾಗುತ್ತಾ ಹೋಗುತ್ತವೆ... ಆ ಹುಡುಗ ಯಾವಾಗ ಅವಳ ಮಾಹಿತಿಯನ್ನು ಕೇಳಲು ಪ್ರಾರಂಭಿಸುತ್ತಾನೋ ಆಗ ಆ ನಕಲಿ ಖಾತೆ ಮಾಡಿಕೊಂಡ ಹುಡುಗಿ, ದಿಕ್ಕು ತಪ್ಪಿಸಲು ಪ್ರಾರಂಭಿಸುತ್ತಾಳೆ. ಖಾತೆಯಲ್ಲಿ ನಮೂದಿಸಿರುವುದು ನನ್ನ ನಿಜವಾದ ಹೆಸರಲ್ಲ. ನನಗೆ ಬೇರೆಯದೇ ಹೆಸರಿದೆ. ನಾನು ಅಲ್ಲಿಯವಳು... ಇಲ್ಲಿಯವಳು ಎಂದು ಏನೇನೋ ಹೇಳುತ್ತ ಹುಡುಗರನ್ನು ಯಾಮಾರಿಸುತ್ತಾಳೆ. ಇಂತಹ ವಿಕೃತ ಮನಸ್ಸಿನ ಹುಡುಗಿಯರ ಗುಂಪೇ ಪೇಸ್ಬುಕ್ ಖಾತೆಯಲ್ಲಿ ಇದೆ ಎಂದರೂ ತಪ್ಪಾಗಲಾರದು.
ಯಾವುದಕ್ಕೂ ಫೇಸ್ಬುಕ್ ಬಳಕೆ ಮಾಡುವ ಮುನ್ನ... ಸ್ನೇಹಿತರ ಬಳಗಕ್ಕೆ ಅನಾಮಧೇಯರನ್ನು ಸೇರಿಸಿಕೊಳ್ಳುವುದಕ್ಕೂ ಮುನ್ನ... ಹಾಗೆಯೇ ಸ್ನೇಹಿತರಾಗಲು ಮನವಿ ಕಳುಹಿಸುವುದಕ್ಕೂ ಮುನ್ನ.... ಮುಂದಾಲೋಚನೆ ವಹಿಸುವುದು ಒಳಿತು. ಆ ಮುಂದಾಲೋಚನೆ ಎಷ್ಟೋ ಅವಘಡಗಳನ್ನು, ಮಾನಸಿಕ ಹಿಂಸೆಯನ್ನು ಹಾಗೂ ಸಮಯವನ್ನು ಉಳಿತಾಯ ಮಾಡಬಹುದು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ