ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ
ಮುಂಗಾರು ಆರಂಭಕ್ಕೂ ಪೂರ್ವವೇ ವರ್ಷೆಯ ತೆಕ್ಕೆಗೆ ಬಿದ್ದು ಬಿಟ್ಟೆ...! ಎಂದೂ ಬಾರದ ವಿರಹಾಗ್ನಿ ಇಂದು ಮೈ ಮನವನ್ನೆಲ್ಲ ಆವರಿಸಿ ಧಗಧಗನೆ ಬೇಯಿಸುತ್ತಿತ್ತು. ಅದರ ಬೇಗುದಿಗೆ ಬೆಂದು ಹೋಗುತ್ತೇನೋ ಎನ್ನುವ ಭೀಭತ್ಸ ಭಾವ ಕಾಡುತ್ತಲೇ ಇತ್ತು. ಇನಿಯನ ತೊಳಲಾಟ ನೋಡದ ವರ್ಷೆ, ಮುಸ್ಸಂಜೆ ಹೊತ್ತಲ್ಲಿ ಬಾನಂಗಳದಿಂದ ಓಡೋಡಿ ಬಂದಳು. ಎದೆಯ ಹರವಿನ ಮೇಲೆ ಬಿದ್ದು ಓಲಾಡಿದಳು. ಕಚಕುಳಿ ಇಡುತ್ತ ಮನದಣಿಯೇ ಕುಣಿದಾಡಿದಳು. ಕೊತಕೊತನೆ ಕುದಿಯುತ್ತಿದ್ದ ಇನಿಯನ ವಿರಹಾಗ್ನಿಯನ್ನು ತನ್ನ ತಣ್ಣನೆಯ ಸ್ಪರ್ಷದಿಂದ ಮಾಯವಾಗಿದಳು. ನನ್ನ ವರ್ಷೆಯ ಧ್ಯಾನದಲ್ಲಿಯೇ ಇನ್ನೊಂದೆರಡು ದಿನ ಕಳೆಯಬಹುದು. ತದನಂತರ ಮತ್ತೆ ಆರಂಭ, ವಿರಹ, ವೇದನೆ... ಮುಂಗಾರು ಆರಂಭವಾಗುವವರೆಗೂ!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ