ಬರ ಸಿಡಿಲು ಎರಗಿದಾಗ......!!
ತೇನ ವಿನಾ ತೃಣಮಪಿ ನ ಚಲತೆ...
ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ,
ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ
ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು.
ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ
ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು
ವಿಪರ್ಯಾಸ... ನೋವು... ನಿರಾಶೆ... ದುಃಖ... ಕಣ್ಣಿರು... ಸಾಂತ್ವನ... ಹತಾಶೆ... ಇವುಗಳ ನಡುವೆಯೇ ಭಗವಂತನಲ್ಲಿ ಆರ್ತ ಮೊರೆ...!!
ಅದೊಂದು ಅಪೂರ್ವ ಸಂಗಮ. ಅಲ್ಲಿದ್ದ ಪ್ರತಿಯೊಬ್ಬರಲ್ಲೂ ಸಂಭ್ರಮ-ಉತ್ಸಾಹ ಎಲ್ಲೆ ಮೀರಿತ್ತು. ತಳಿರು-ತೋರಣಗಳಿಂದ ಮನೆ ಸಿಂಗಾರಗೊಂಡು ಮಧುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ವಿದ್ಯುದ್ದೀಪಗಳ ಬೆಳಕು ಕಣ್ಮನಗಳನ್ನು ಸೂರೆಗೊಳಿಸುತ್ತಿತ್ತು. ಮನೆ-ಮಂದಿಯೆಲ್ಲ ಹಿರಿಹಿರಿ ಹಿಗ್ಗುತ್ತ ಅತ್ತಿಂದಿತ್ತ ಓಡಾಡುತ್ತಿದ್ದರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ, ಅದು ಸ್ವರ್ಗಕ್ಕೆ ಕಿಚ್ಚು ಹಚ್ಚುವ ವಾತಾವರಣ...!!
ಇನ್ನೇನು ಬೆಳಕು ಹರಿದರೆ ಸಾಕು, ಕನಸಿನ ಮನೆಗೆ ಪ್ರವೇಶ ಮಾಡುವ ನಾಂದಿ ಕಾರ್ಯಕ್ರಮಕ್ಕೆ ಚಾಲನೆ. ಪೂರ್ವ ನಿಯೋಜಿತವಾಗಿ ಎಲ್ಲ ಕಾರ್ಯಗಳು ಮುಗಿದಿದ್ದವು. ನೆಂಟರಿಷ್ಟರು ಒಂದೆಡೆ ಸೇರಿ ರಾತ್ರಿ 12ರ ವರೆಗೂ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲೆ, ಪಕ್ಕದಲ್ಲಿ ಕುಳಿತ ಮನೆ ಯಜಮಾನ ಚಿಕ್ಕದಾಗಿ ಕೆಮ್ಮಲು ಪ್ರಾರಂಭಿಸಿದ. ಆ ಕೆಮ್ಮು ನಿಧಾನವಾಗಿ ಹೆಚ್ಚುತ್ತ ಹೋಯಿತು. ನೋಡು ನೋಡುತ್ತಿದ್ದಂತೆ ವಾಂತಿ ಮಾಡಲಾರಂಭಿಸಿದ. ಹರಟೆಯಲ್ಲಿ ತೊಡಗಿದ್ದ ನೆಂಟರೆಲ್ಲ ಗಾಬರಿಯಾದರು. ಕಾರ್ಗತ್ತಲ ರಾತ್ರಿಯಲ್ಲಿ ಗರ ಬಡಿದವರಂತಾದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಅವರನ್ನು ಕೂಲಕಂಷವಾಗಿ ಪರೀಕ್ಷಿಸಿದ ವೈದ್ಯರು ಹೃದಯದಲ್ಲಿ ಹೋಲ್ ಆಗಿದೆ. ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸಲಹೆ ನೀಡಿದರು.
ಇತ್ತ ಮನೆಯಲ್ಲಿ ಆತಂಕ ಮಡುಗಟ್ಟಿತ್ತು. ಯಜಮಾನನ ಹೆಂಡತಿ ಒಂದೇ ಸಮನೆ ಅಳುತ್ತ, ಕಣ್ಣೆಲ್ಲ ಕೆಂಪಾಗಿಸಿಕೊಂಡಿದ್ದಳು. ಹೊಸ ಮನೆಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಆನಂದ ಭಾಷ್ಪ ಹರಿಸಬೇಕಾದ ಕಣ್ಣಾಲಿಗಳು, ದುಃಖದಿಂದ ಕಣ್ಣೀರ ಹೊಳೆಯನ್ನು ಹರಿಸುತ್ತಿತ್ತು. ಇಪ್ಪತ್ತು ವರ್ಷಗಳಿಂದ ಕಂಡ ಕನಸು ನನಸಾಗೋ ಅಂತಿಮ ಕ್ಷಣದಲ್ಲಿ, ಅನಿರೀಕ್ಷಿತವಾಗಿ ಬಂದೆರಗಿದ ಬರಸಿಡಿಲು ಬದುಕನ್ನೇ ಹಿಂಡಿ-ಹಿಪ್ಪೆ ಮಾಡಿದಂತಿತ್ತು. ಹೊಸ ಮನೆಯ ಪ್ರವೇಶದ ಉತ್ಸಾಹದಲ್ಲಿ ಪಾಲ್ಗೊಳ್ಳಲು ಬಂದ ಸಂಬಂಧಿಗಳ ಹೃದಯಗಳೆಲ್ಲ ಆದ್ರಗೊಂಡಿತ್ತು.ಕಂಡ-ಕಂಡ ದೇವರಿಗೆ ಸಾಲು ಸಾಲಾಗಿ ಮೆರವಣಿಗೆ ರೂಪದಲ್ಲಿ ಪ್ರಾರ್ಥನೆಗಳು ಹೋಗುತ್ತಿದ್ದವು. ಹರಕೆಗಳನ್ನು ಹೊತ್ತು ಕರಗಳನ್ನು ಜೋಡಿಸಿ, ಎದುರಾದ ಸಂಕಷ್ಟ ದೂರಮಾಡಪ್ಪ ಎಂದು ಮೊರೆಯಿಡುತ್ತಿದ್ದರು. ಅಳುವ ಮನಸ್ಸುಗಳಿಗೆ ಸಾಂತ್ವನ ಹೇಳುವ ಪ್ರಬುದ್ಧ ಜೀವಗಳು ಅಲ್ಲಿದ್ದು, ಧೈರ್ಯ ತುಂಬುತ್ತಿದ್ದವು.ಇನ್ನೇನು ಬೆಳಕು ಹರಿದರೆ ಸಾಕು, ಕನಸಿನ ಮನೆಗೆ ಪ್ರವೇಶ ಮಾಡುವ ನಾಂದಿ ಕಾರ್ಯಕ್ರಮಕ್ಕೆ ಚಾಲನೆ. ಪೂರ್ವ ನಿಯೋಜಿತವಾಗಿ ಎಲ್ಲ ಕಾರ್ಯಗಳು ಮುಗಿದಿದ್ದವು. ನೆಂಟರಿಷ್ಟರು ಒಂದೆಡೆ ಸೇರಿ ರಾತ್ರಿ 12ರ ವರೆಗೂ ಹರಟೆ ಹೊಡೆಯುತ್ತಿದ್ದರು. ಅಷ್ಟರಲ್ಲಾಗಲೇ ಅಲ್ಲೆ, ಪಕ್ಕದಲ್ಲಿ ಕುಳಿತ ಮನೆ ಯಜಮಾನ ಚಿಕ್ಕದಾಗಿ ಕೆಮ್ಮಲು ಪ್ರಾರಂಭಿಸಿದ. ಆ ಕೆಮ್ಮು ನಿಧಾನವಾಗಿ ಹೆಚ್ಚುತ್ತ ಹೋಯಿತು. ನೋಡು ನೋಡುತ್ತಿದ್ದಂತೆ ವಾಂತಿ ಮಾಡಲಾರಂಭಿಸಿದ. ಹರಟೆಯಲ್ಲಿ ತೊಡಗಿದ್ದ ನೆಂಟರೆಲ್ಲ ಗಾಬರಿಯಾದರು. ಕಾರ್ಗತ್ತಲ ರಾತ್ರಿಯಲ್ಲಿ ಗರ ಬಡಿದವರಂತಾದ ಮನೆಯವರು ಕೂಡಲೇ ಆತನನ್ನು ಆಸ್ಪತ್ರೆಗೆ ಸೇರಿಸಿದರು. ಅವರನ್ನು ಕೂಲಕಂಷವಾಗಿ ಪರೀಕ್ಷಿಸಿದ ವೈದ್ಯರು ಹೃದಯದಲ್ಲಿ ಹೋಲ್ ಆಗಿದೆ. ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸಲಹೆ ನೀಡಿದರು.
ದೈವಿಚ್ಛೆಯೋ.... ಪ್ರಾರ್ಥನೆಯ ಫಲವೋ.... ಬಂಧುಗಳ ಆರ್ತ ಮೊರೆಯೋ.... ಏನೋ, ಆಸ್ಪತ್ರೆಯಲ್ಲಿ ದಾಖಲಾದ ಯಜಮಾನ ನಿಧಾನವಾಗಿ ಚೇತರಿಕೊಳ್ಳಲಾರಂಭಿಸಿದ. ಅನ್ನಾಹಾರ ತಿನ್ನುತ್ತ, ಗೆದ್ದು ಬಂದೆ ಎನ್ನುವ ಸಂತಸವನ್ನು ಮೊಗದಲ್ಲಿ ಕಾಣಿಸುತ್ತಿದ್ದ. ಆ ಸುದ್ದಿ ಇತ್ತ ಕಿವಿಗೆ ಅಪ್ಪಳಿಸುತ್ತಿದ್ದಂತೆ, ತುಪ್ಪದ ದೀಪಗಳು ದೇವರ ಮುಂದೆ ಪ್ರತ್ಯಕ್ಷವಾದವು. ದುಃಖದ ಕಣ್ಣೀರಿನಿಂದ ತೇವವಾದ ಕಣ್ಣಾಲಿಗಳು, ಆನಂದ ಭಾಷ್ಪ ಹರಿಸುತ್ತಿದ್ದವು.
ಅನಿವಾರ್ಯವೆಂಬಂತೆ ಮನೆಯ ಪ್ರವೇಶವನ್ನು ಮುಂದೂಡಲಾಗಿದೆ. ಒಂದೆಡೆ ಸೇರಿದ ನೆಂಟರಿಷ್ಟರೆಲ್ಲ ತಮ್ಮ ತಮ್ಮ ಮನೆಗೆಳಿಗೆ ವಾಪಸ್ಸಾಗಿದ್ದಾರೆ. ಯಜಮಾನ ಗುಣಮುಖನಾಗಿ ಮನೆಗೆ ಬಂದ ಮೇಲೆ `ಮನೆ ಪ್ರವೇಶ'ದ ದಿನವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಬಂಧು-ಬಾಂಧವರ ಜೊತೆ ಆಪ್ತೇಷ್ಟರೂ ಕೂಡಾ ಮುಂದೂಡಿದ `ಮನೆ ಪ್ರವೇಶ'ಕ್ಕೆ ಜೊತೆಯಾಗಲಿದ್ದಾರೆ. ಸಂಭ್ರವ, ಸಂತೋಷ, ಉತ್ಸಾಹ ಇನ್ನೊಮ್ಮೆ ತುಂಬಿ ತುಳಕಲಿದೆ. ಆ ಕುಟುಂಬ ನೂರ್ಕಾಲ ಸುಖ-ಸಂತೋಷದಿಂದ ನೂತನ ಮನೆಯಲ್ಲಿ ಬದುಕಿ ಬಾಳಿ ಎಂದು ಹರಸಿ ಹಾರೈಸೋಣ....!!
ಅನಿವಾರ್ಯವೆಂಬಂತೆ ಮನೆಯ ಪ್ರವೇಶವನ್ನು ಮುಂದೂಡಲಾಗಿದೆ. ಒಂದೆಡೆ ಸೇರಿದ ನೆಂಟರಿಷ್ಟರೆಲ್ಲ ತಮ್ಮ ತಮ್ಮ ಮನೆಗೆಳಿಗೆ ವಾಪಸ್ಸಾಗಿದ್ದಾರೆ. ಯಜಮಾನ ಗುಣಮುಖನಾಗಿ ಮನೆಗೆ ಬಂದ ಮೇಲೆ `ಮನೆ ಪ್ರವೇಶ'ದ ದಿನವನ್ನು ನಿಗದಿ ಮಾಡಲು ನಿರ್ಧರಿಸಲಾಗಿದೆ. ಈ ಬಂಧು-ಬಾಂಧವರ ಜೊತೆ ಆಪ್ತೇಷ್ಟರೂ ಕೂಡಾ ಮುಂದೂಡಿದ `ಮನೆ ಪ್ರವೇಶ'ಕ್ಕೆ ಜೊತೆಯಾಗಲಿದ್ದಾರೆ. ಸಂಭ್ರವ, ಸಂತೋಷ, ಉತ್ಸಾಹ ಇನ್ನೊಮ್ಮೆ ತುಂಬಿ ತುಳಕಲಿದೆ. ಆ ಕುಟುಂಬ ನೂರ್ಕಾಲ ಸುಖ-ಸಂತೋಷದಿಂದ ನೂತನ ಮನೆಯಲ್ಲಿ ಬದುಕಿ ಬಾಳಿ ಎಂದು ಹರಸಿ ಹಾರೈಸೋಣ....!!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ